ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ, ವಾಜಪೇಯಿ ಅವರಿಂದ ಕಲಿಯಿರಿ

Last Updated 12 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿ­ಗಳು ಎದುರಾಳಿಗಳ ಕುರಿತು ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡಬಾರದು ಎಂಬುದು ಮಾದರಿ ಚುನಾವಣಾ ನೀತಿ ಸಂಹಿ­ತೆಯ ಮೊದಲ ಪುಟದಲ್ಲೇ ಇರುವ ನಿಯಮ. ಇದು ಕಾಂಗ್ರೆಸ್‌  ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ  ನರೇಂದ್ರ ಮೋದಿ ಅವರಿಗೆ ತಿಳಿಯದ ಸಂಗತಿ­ಯೇನೂ ಅಲ್ಲ.

ಆದರೆ ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ಮೋದಿ, ರಾಹುಲ್‌ ಅವರನ್ನು ‘ಮಂಗಳ ಗ್ರಹದ ಮಹಾಶಯ’ ಎಂದು ಮೂದಲಿಸಿದರು. ಇದಕ್ಕೆ ಪ್ರತ್ಯುತ್ತರ ಎಂಬಂತೆ ರಾಹುಲ್‌ ಅವರು ಮೋದಿ­ಯ­ವರನ್ನು ‘ಹಿಟ್ಲರ್‌’ ಎಂದು ಜರಿದಿದ್ದಾರೆ.

‘ವಾಜಪೇಯಿ ಮುಂದೊಂದು ದಿನ ಈ ದೇಶ­ವನ್ನು ಮುನ್ನಡೆಸುವ ನೇತಾರ ಆಗುತ್ತಾನೆ’ ಎಂದು ಕಾಂಗ್ರೆಸ್ಸಿಗರ ಬಳಿ ನೆಹರೂ ಮೆಚ್ಚುಗೆ ವ್ಯಕ್ತ­ಪಡಿಸಿ­ದ್ದರಂತೆ. ಅದೇ ರೀತಿ ವಾಜಪೇಯಿ ಅವರು ಕೇಂದ್ರ ಸಚಿವರಾದಾಗ ತಮ್ಮ ಕಚೇರಿ­ಯಲ್ಲಿ ನೆಹರೂ ಭಾವಚಿತ್ರ ಇಟ್ಟುಕೊಂಡಿ­ದ್ದರಂತೆ. ಮೋದಿ ಮತ್ತು ರಾಹುಲ್‌ ಅವರಿಗೆ ಈ ವಿಚಾರಗಳನ್ನು ಅವರ ಪಕ್ಷದ ಹಿರಿಯರು ತಿಳಿಸಬೇಕು.

ರಾಹುಲ್‌ ಅವರನ್ನು ‘ಮಂಗಳ ಗ್ರಹದ ಮಹಾಶಯ’ ಎಂದು ಹಾಸ್ಯ ಮಾಡುವ ಅಧಿಕಾರ ಮೋದಿಯವರಿಗೆ ಇಲ್ಲ. ಅದೇ ರೀತಿ ಮೋದಿ ಅವರನ್ನು ಹಿಟ್ಲರ್‌ ಜೊತೆ ಹೋಲಿಸುವ ಅಧಿಕಾರವೂ ರಾಹುಲ್‌ ಅವರಿಗಿಲ್ಲ. ರಾಹುಲ್‌ ಮತ್ತು ಮೋದಿ ಅವರಿಬ್ಬರೂ ಈ ದೇಶಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ಮಾತ್ರ ವಿವರಿಸಲಿ. ಅವರ ಉಪದೇಶ ಕೇಳುವಷ್ಟು ವ್ಯವಧಾನ ಭಾರತೀಯರಿಗೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT